Production made in order to promote one extraordinarily talented team YANA DANCE THEATRE from Manipal

Direction: Prashanth Udhyavara, who won first place in the National Theatre competition.

Music composition: GHK Studios

Singer: Ira Achary ; KGF frame joke song singer

Cinematography and editing: Hues by Artopia and Last Miles Studio

Year of Release: 2020

Female means power. This girl is the one who hides all the power of the world in herself and always envelops everyone in love. She is loving, kind and forgiving. For that, a woman is seen as an indescribable force. Female love is a symbol of trust, the light that illuminates the house. Women are nature… female power that incarnates in various forms. All the mythological stories describe the hardships of women. It is heartbreaking to hear that any girl was not perfectly happy. It is a painful thing that he did not have a comfortable life even in the palace. Woman is the beginning and woman is the end. Knowing this fact is enough to give meaning to her birth.

Kalabhi’s first dream presentation “Shikhi” is our first step as art parents.

ಮಣಿಪಾಲದಿಂದ ಅಸಾಧಾರಣ ಪ್ರತಿಭಾವಂತ ತಂಡ ಯಾನಾ ಡ್ಯಾನ್ಸ್ ಥಿಯೇಟರ್ ಅನ್ನು ಉತ್ತೇಜಿಸುವ ಸಲುವಾಗಿ ನಿರ್ಮಾಣ ಮಾಡಲಾಗಿದೆ

ನಿರ್ದೇಶನ: ಪ್ರಶಾಂತ್ ಉದ್ಯಾವರ.

ಸಂಗೀತ ಸಂಯೋಜನೆ: GHK ಸ್ಟುಡಿಯೋಸ್

ಗಾಯಕಿ: ಇರಾ ಆಚಾರ್ಯ; ಕೆಜಿಎಫ್ ಫ್ರೇಮ್ ಜೋಕ್ ಹಾಡಿನ ಗಾಯಕಿ

ಛಾಯಾಗ್ರಹಣ ಮತ್ತು ಸಂಕಲನ:  ಹ್ಯೂಸ್ ಬೈ ಆರ್ಟೋಪಿಯಾ 

ಬಿಡುಗಡೆಯ ವರ್ಷ: 2020

ಹೆಣ್ಣು ಎಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ಹೆಣ್ಣು. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಅದಕ್ಕೆ ಹೆಣ್ಣು ಅಂದ್ರೆ ವರ್ಣಿಸಲಾಗದ ಶಕ್ತಿಯಾಗಿ ಕಾಣುವುದು. ಹೆಣ್ಣು ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು. ಹೆಣ್ಣೆಂದರೆ ಪ್ರಕೃತಿ… ಹೀಗೆ ನಾನಾ ರೂಪದಲ್ಲಿ ಅವತರಿಸುವವಳೆ ಸ್ತ್ರೀ ಶಕ್ತಿ.ಪುರಾಣದ ಕತೆಗಳೆಲ್ಲ ಹೆಣ್ಣಿನ ಕಷ್ಟವನ್ನು ಪರಿಪರಿಯಾಗಿ ಬಣ್ಣಿಸಿವೆ. ಯಾವ ಹೆಣ್ಣು ಪರಿಪೂರ್ಣ ಸುಖಿಯಾಗಿರಲಿಲ್ಲ ಅನ್ನುವುದನ್ನು ಕೇಳುವಾಗ ಮನಸ್ಸು ಖಿನ್ನವಾಗುತ್ತದೆ. ಅರಮನೆಯಲ್ಲಿದ್ದರೂ ಆರಾಮದ ಜೀವನ ಅವರಿಗಿರಲಿಲ್ಲ ಅನ್ನುವುದೇ ನೋವಿನ ವಿಷಯ. ಹೆಣ್ಣೆಂದರೆ ಆದಿ ಹೆಣ್ಣೆಂದರೆ ಅಂತ್ಯ. ಈ ಸತ್ಯ ಅರಿವಾದರೂ ಸಾಕು ಅವಳ ಹುಟ್ಟಿಗೊಂದು ಅರ್ಥ ಸಿಗಬಹುದು.

ಕಲಾ ಪೋಷಕರಾದ ನಮ್ಮ ಪ್ರಥಮ ಹೆಜ್ಜೆಯಾದ ಕಲಾಭಿಯ ಮೊದಲ ಕನಸಿನ ಪ್ರಸ್ತುತಿ ” ಶಿಖಿ”.