A play Adapted from Rastra Kavi Kuvempu’s Ramayana Darshanam

Directed by: Ganesh Mandarthi ( Ninasam )

In this play, 4 young and Professional artists decorate the stage and express the feel of mamathe  (overdosed love and affection).

Artists: Sweedal D’souza (Ninasam), Prakash K Manjeshwar (Ninasam), Trisha Shetty, Ujwal UV (Ninasam)

Light Designer: Raju Manipal

The play is mainly focusing on the love, affection and warmth of one’s life. Here Every character will be in the bond around the process of love. Rama, Kaike, Manthare, and Dasharatha all are connected to something in the world of realities.

In the rooted Ramayana by Valmiki lesson to evil is the theme but in Kuvempu Ramayana Evil conversion.
Every crime has a way to be cleared is the line that motivates every individual to live life.

We are playing this play to know that all these characters have affected our daily life and we need to know the role of an individual.

ರಾಷ್ಟ್ರಕವಿ ಕುವೆಂಪು ಅವರ ರಾಮಾಯಣ ದರ್ಶನಂ ನಾಟಕವನ್ನು ಅಳವಡಿಸಲಾಗಿದೆ. ಈ ನಾಟಕದಲ್ಲಿ 4 ಯುವ ಮತ್ತು ವೃತ್ತಿಪರ ಕಲಾವಿದರು ವೇದಿಕೆಯನ್ನು ಅಲಂಕರಿಸುತ್ತಾರೆ ಮತ್ತು ಮಮತೆಯ ಭಾವನೆಯನ್ನು ವ್ಯಕ್ತಪಡಿಸುತ್ತಾರೆ (ಅತಿಯಾದ ಪ್ರೀತಿ ಮತ್ತು ವಾತ್ಸಲ್ಯ).

ನಿರ್ದೇಶನ: ಗಣೇಶ್ ಮಂದಾರ್ತಿ (ನೀನಾಸಂ)

ಕಲಾವಿದರು: ಸ್ವೀಡಲ್ ಡಿಸೋಜಾ (ನೀನಾಸಂ), ಪ್ರಕಾಶ್ ಕೆ ಮಂಜೇಶ್ವರ್ (ನೀನಾಸಂ), ತ್ರಿಶಾ ಶೆಟ್ಟಿ, ಉಜ್ವಲ್ ಯುವಿ (ನೀನಾಸಂ)

ಲೈಟ್ ಡಿಸೈನರ್: ರಾಜು ಮಣಿಪಾಲ

ಮಂಥರಾ-ಮಂಧನವಿದು.ಮಮತೆಯ ಕೋಡಿ ಮಿತಿ ಮೀರಿ ಹರಿದು, ಅಮೃತ ವಿಷವಾದ ಅವಾಂತರ. ಕೈಕೆ-ಭರತರನ್ನು ಎತ್ತಿ-ಆಡಿಸಿದ ಮಂಥರೆಗೆ ಮತ್ತುಳಿದವರ
ನಂಟೆಲ್ಲ, ಅವರಿಬ್ಬರಿಗಾಗಿ ಈ ಜಗ, ಅವರಿಬ್ಬರಿಗಾಗಿ ಮಾತ್ರ ದಶರಥನಿರುವುದು.ಅಯೋಧ್ಯೆ ಇರುವುದೇ ಭರತನಾಳ್ವಿಕೆಗಾಗಿ. ಸೂರ್ಯ-ಚಂದ್ರ-ನಕ್ಷತ್ರಗಳೆಲ್ಲಾ ಬೆಳಗುವುದು ಅವರಿಬ್ಬರಿಗಾಗಿ. ತಾನಾಡಿಸಿದ ಮಕ್ಕಳೇ ತನಗೆ ಸರ್ವಸ್ವವನ್ನುತ್ತಿರುವ ಮಂಧರೆ, ನಮಗೆ ಜಗದ ಎಲ್ಲಾ ತಾಯಿಯಂತೆಯೇ ಅನ್ನಿಸಿಬಿಡುತ್ತಾಳೆ.ತಮ್ಮ ಮಕ್ಕಳೇ ತಮತಮಗೆ ಮೊದಲಲ್ಲವೆ!

ಆಶಿಸಿದ್ದು ಏನನ್ನು?

ಮಮತೆಯ ಸುಳಿಯಲ್ಲಿ ಇಲ್ಲಿ ಕೇವಲ ಮಂಥರೆ ಮಾತ್ರ ಸಿಲುಕಿಲ್ಲ;ದಶರಥನೂ ಸುತ-ಮೋಹ ಜ್ವಾಲಾಜಾಲದೊಳಗೆ ಸಿಲುಕಿ ಒದ್ದಾಡುವುದನ್ನೂ ನಾವಿಲ್ಲಿ ಕಾಣಬಹುದು.ಕೈಕೆಯೂ. ಇದಕೆ ಹೊರತಲ್ಲ.ಗಿರಿವನ ಪ್ರೇಮಿ ರಾಮನೂ ಪಟ್ಟಾಭಿಷೇಕದ ಸಂಭ್ರಮಕ್ಕಿಂತಲೂ ಕಾಡಿನಲ್ಲಿ ಬದುಕಲು ಹಾತೊರೆಯುವ ಕಡುಮೋಹಿಯಂತೆಯೇ ನಮಗಿಲ್ಲಿ ಕಾಣಿಸುತ್ತಾನೆ.ಎಲ್ಲರೂ. ಇಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮೋಹಿಗಳೆ, ವಾಲ್ಮೀತಿ ರಾಮಾಯಣದಲ್ಲಿ ದುಷ್ಟ ಶಿಕ್ಷಣವೇ ಪಾಠವಾದರೆ, ಕುವೆಂಪು ರಾಮಾಯಣದಲ್ಲಿ ದುಷ್ಟ ಪರಿವರ್ತನೆಯೇ ಹೆಚ್ಚು ಮೆಚ್ಚಾಗುತ್ತದೆ.ಪಾಪಿಗೂ ಉದ್ದಾರವಿದೆ ಸೃಷ್ಟಿ ಮಹಾವ್ಯೂಹ ರಚನೆಯಲ್ಲಿ ಎಂಬಂಥ ಮಾತುಗಳು ಬದುಕುವ ಆಶೆ ತುಂಬಿಸುತ್ತದೆ.

ರಾಮನ ಮರಳಿ ತಂದರೆ ಕೈಕೆ-ಭರತರ ಮೊದಲ ಪ್ರೇಮ ದಕ್ಕುವುದೆಂಬ ಕಾರಣಕ್ಕೆ ರಾಮನನ್ನು ಕೂಗುತ್ತಾ ಕಾಡಿಗೆ ತೆರಳುವ ಮಂಧರೆ ಕಾಳ್ಗಿಚ್ಚಿಗೆ ಸಿಕ್ಕಿ ಸಾಯುಜ್ಯ ಪಡೆಯುತ್ತಾಳೆ. ಎಂಬ ಪರಿವರ್ತನಾ ಭಾಗ ನಮಗೀಗ ಬದುಕಿಗೆ ಬೇಕಾಗಿದೆ.

ಮಂಥರೆಯಂಥಾ ಪಾತ್ರವೊಂದನ್ನು ನಾವು ಆಗಾಗ ವಿಶ್ಲೇಷಿಸಿ ಮನತುಂಬಿಕೊಳ್ಳುತ್ತಿರಬೇಕು- ಎಂಬ ಕಾರಣಕ್ಕಾಗಿ ನಾವು ಈ ನಾಟಕವನ್ನು ಸಿದ್ಧಗೊಳಿಸಿದ್ದೇವೆ.