In Collaboration with Arehole Prathistana, this play was presented to the public

Written and Director: Prashanth Udhyavar 

In this play, 2 energetic artists Shwetha Arehole and Trisha D Shetty very strongly present the topic related to gender discrimination and the Eligibility concept

Myths are timeless truths! It is for this reason that epics like the Mahabharata are reinterpreted over time and become closer to ordinary life. The story of Shikhandini from the Mahabharata is a staged experiment that tells a serious subject of mythology as the same serious subject of ‘dvaya’, here is a side plot. Another 0 is his! 20. The tragedy of Shikhandini’s life of Dandva of Purana, who understands the change of Lla’s masculinity to her mother, “actually reinterprets the Ade story through her mother. But. Shiva’s “change is natural. So an attempt to find solace in reality for that tragedy of myth!
“Nothing is wrong here! No one to complain! The shards of emotions that have been frozen for centuries in the inner body burst like a volcano, like a wet charge.

To what extent is this male-female division that we have made correct? Who is responsible for accepting the status quo? The question is where should be changed? Thus Shiva-Shikhandini’s encounter, Janaki Manasvini, Drupada, and Vasavi’s encounter while posing questions.
There is a feeling of male and female in every human being. If those feelings are mixed in equal harmony without increasing or decreasing…..how beautiful life is! Such a simple and beautiful life is a man’s search for love, ‘dwaya’.

ಅರೆಹೊಳೆ ಪ್ರತಿಷ್ಠಾನದ ಸಹಯೋಗದಲ್ಲಿ ಈ ನಾಟಕವನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಲಾಯಿತು

ಬರಹ ಮತ್ತು ನಿರ್ದೇಶನ: ಪ್ರಶಾಂತ್ ಉದ್ಯಾವರ

ಈ ನಾಟಕದಲ್ಲಿ 2 ಶಕ್ತಿಯುತ ಕಲಾವಿದರಾದ ಶ್ವೇತಾ ಅರೆಹೊಳೆ ಮತ್ತು ತ್ರಿಶಾ ಡಿ ಶೆಟ್ಟಿ ಲಿಂಗ ತಾರತಮ್ಯ ಮತ್ತು ಅರ್ಹತಾ ಪರಿಕಲ್ಪನೆಗೆ ಸಂಬಂಧಿಸಿದ ವಿಷಯವನ್ನು ಬಹಳ ಬಲವಾಗಿ ಪ್ರಸ್ತುತಪಡಿಸುತ್ತಾರೆ.

ಪುರಾಣಗಳು ಎಲ್ಲಾ ಕಾಲಕ್ಕೂ ಸಲ್ಲುವ ವೈಚಾರಿಕ ಸತ್ಯಗಳು! ಈ ಕಾರಣದಿಂದಲೇ ಮಹಾಭಾರತದಂತಹ ಮಹಾಕಾವ್ಯಗಳು ಕಾಲಾಂತರದಲ್ಲಿ ಮರು ವ್ಯಾಖ್ಯಾನಗೊಳ್ಳುತ್ತಾ,ಸಾಮಾನ್ಯ ಬದುಕಿಗೆ ಹತ್ತಿರವಾದದ್ದು. ‘ದ್ವಯ’ ಅಂತಹದ್ದೊಂದು ಪುರಾಣದ ಗಂಭೀರ ವಿಷಯವೊಂದನ್ನು ಸಮಾನ್ಯ ಬದುಕಿನ ಅದೇ ಗಂಭೀರ ವಿಷಯವನ್ನಾಗಿ ಹೇಳುವ ರಂಗ ಪ್ರಯೋಗ ಮಹಾಭಾರತದ ಶಿಖಂಡಿನಿಯ ಕತೆ, ಇಲ್ಲಿ ಒಂದು ಪಾರ್ಶ್ವದ ಕಥಾವಸ್ತು. ಇನ್ನೊ 0ದು ತನ್ನ! ಲ್ಲಾದ ಗಂಡಸ್ತನದ ಬದಲಾವಣೆಯನ್ನು ತಾಯಿಗೆ ಅರ್ಥಮಾಡಿಸಿಕೊಳ್ಳುವ “ನಿಟ್ಟಿನಲ್ಲಿ ತನ್ನ ತಾಯಿಯ ಮೂಲಕ ಅದೆ ಕತೆಯನ್ನು ಮರು ವ್ಯಾಖ್ಯಾ ವಿಸುವ ೨೦. ಪುರಾಣದ ಶಿಖಂಡಿನಿಯ ದಂದ್ವದ ಬದುಕಿನ ದುರಂತ ಒತ್ತಾಯಪೂರ್ವಕವಾಗಿ ನಡೆಯುತ್ತದೆ. ಆದರೆ. ಶಿವೆಯ “ಬದಲಾವಣೆ ಸಹಜವಾಗಿ ಆದದ್ದು. ಹಾಗಾಗಿ ಪುರಾಣದ ಆ ದುರಂತಕ್ಕೆ ವಾಸ್ತವದಲ್ಲಿ ಸಾಂತ್ವನ ಕಂಡುಕೊಳ್ಳುವ ಪ್ರಯತ್ನ!
“ಇಲ್ಲಿ ಯಾರದ್ದೂ ತಪ್ಪಿಲ್ಲ! ಯಾರನ್ನು ದೂರುವೂದು ಇಲ್ಲಾ! ಅಂತರಂಗದಲ್ಲಿ ಶತಮಾನಗಳಿಂದ ಹೆಪ್ಪುಗಟ್ಟಿದ ಶಿಖಂಡಿನಿಯ ಭಾವನೆಗಳು ಕಟ್ಟೆಯೊಡೆದು ಜ್ವಾಲಾಮುಖಿಯಂತೆ ಸಿಡಿಯುತ್ತದೆ,ಆರ್ದ್ರ ಆವೇಷದಂತೆ.

ನಾವೇ ಮಾಡಿಕೊಂಡಿರುವ ಈ ಗಂಡು – ಹೆಣ್ಣೆಂಬ ವಿಭಜನೆ ಎಷ್ಟರ ಮಟ್ಟಿಗೆ ಸರಿ ?ನಟ್ಟ ನಡುವಿನ ಸ್ಥಿತಿಯನ್ನು ಒಪ್ಪಿಕೊಳ್ಳಬೇಕಾದ ಜವಾಬ್ದಾರಿ ಯಾರದ್ದು? ಬದಲಾಗಬೇಕಾದದ್ದು ಎಲ್ಲಿ ಎನ್ನುವ ಪ್ರಶ್ನೆ ? ಹೀಗೆ ಪ್ರಶ್ನೆಗಳನ್ನು ಮುಂದಿಡುತ್ತಲೇ ಶಿವಿ-ಶಿಖಂಡಿನಿಯ ಮುಖಾಮುಖಿ, ಜಾನಕಿ ಮನಸ್ವಿನಿ,ದ್ರುಪದ,ವಾಸವಿಯರ ಮುಖಾಮುಖಿ.
ಪ್ರತಿಯೊಂದು ಮನುಷ್ಯ ಜೀವಿಯೊಳಗೂ ಗಂಡು-ಹೆಣ್ಣೆಂಬ ಭಾವವಿದೆ.ಆ ಭಾವಗಳು ಹೆಚ್ಚೂ ಆಗದೇ..ಕಡಿಮೆಯೂಗೊಳ್ಳದೆ ಸಮಾನವಾದ ಹದದಲ್ಲಿ ಬೆರೆತರೆ…..ಬದುಕು ಎಷ್ಟೊಂದು ಸುಂದರ! ಇಂತಹ ಸರಳ ಸುಂದರ ಬದುಕಿನ ಮನುಷ್ಯ ಪ್ರೀತಿಯ ಹುಡುಕಾಟವೇ ‘ದ್ವಯ’