Featuring creative photographers of mangalore Sujith Kuduva, Murali M Abbemane, Akshay Shetty, Karthik Kamath, Sanketh Uday Kumar 

Contemplate “Photography Exhibition – Kalabhi (R) is its second successful experiment. It was planned to be held on 7th, 8th and 9th of November at Prasad Art Gallery, Mangalore and was successfully held for three days. But as per the demand of the audience, art lovers and art patrons, the photography was to be held for 3 days. The release of the film was postponed for another three days and the program was a huge success.

This photography exhibition was organized by renowned photographers as well as P. H. Dr. who has completed D. Vineeth Kumar inaugurated the program by lighting the lamp.

Photographers Sujith SK, Akshay Ortopia, Ashash Ortopia, Murali Abbemane, Sanket Kottari and Karthik Kamath have exhibited their art in this photography exhibition. He presented theatre, lifestyle, abstracts, street and monochrome photography. 25 frames were presented in the exhibition. Another feature is that many of the photographs are taken on mobile phones.

ಮಂಗಳೂರಿನ ಸೃಜನಶೀಲ ಛಾಯಾಗ್ರಾಹಕರಾದ ಸುಜಿತ್ ಕುಡುವ, ಮುರಳಿ ಎಂ ಅಬ್ಬೆಮನೆ, ಅಕ್ಷಯ್ ಶೆಟ್ಟಿ, ಕಾರ್ತಿಕ್ ಕಾಮತ್, ಸಂಕೇತ್ ಉದಯ್ ಕುಮಾರ್

Contemplate “ಛಾಯಾಗ್ರಾಹಣ ಚಿತ್ರ ಪ್ರದರ್ಶನ – ಕಲಾಭಿ (ರಿ) ಇದರ ಎರಡನೇ ಯಶಸ್ವಿ ಪ್ರಯೋಗ. ಮಂಗಳೂರಿನ ಪ್ರಸಾದ್‌ ಆರ್ಟ್‌ ಗ್ಯಾಲರಿ ಯಲ್ಲಿ ನವೆಂಬರ್‌ 7,8 ಹಾಗೂ 9 ನೇ ತಾರೀಖಿಗೆ ನಡೆಸಲು ತಯಾರಿಯಾಗಿತ್ತು ಹಾಗೆ ಯಶಸ್ವಿಯಾಗಿ ಮೂರು ದಿನ ನಡೆಯಿತು ಕೂಡ. ಆದರೆ ಪ್ರೇಕ್ಷಕರ, ಕಲಾಭಿಮಾನಿಗಳ ಹಾಗೂ ಕಲಾಪೋಷಕರ ಅಪೇಕ್ಷೆಯ ಮೇರೆಗೆ 3 ದಿನಗಳ ಕಾಲ ನಡೆಯಬೇಕಿದ್ದ ಛಾಯಾಗ್ರಾಹಣ ಚಿತ್ರ ಪ್ರದರ್ಶನವನ್ನು ಮತ್ತೇ ಮೂರು ದಿನ ಮುಂದೂಡಲಾಗಿತ್ತು. ಹಾಗೂ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ಮೂಡಿ ಬಂತು.

ಈ ಛಾಯಾಗ್ರಹಣ ಚಿತ್ರಪ್ರದರ್ಶನವನ್ನು ಖ್ಯಾತ ಛಾಯಾಗ್ರಾಹಕರಾದ ಹಾಗೆಯೇ ಕಪ್ಪೆಗಳ ಜೀವನಶೈಲಿ ಹಾಗೂ ಅದರ ಆಗುಹೋಗುಗಳನ್ನು ಸೆರೆ ಹಿಡಿಯುವಲ್ಲಿ ಪಿ. ಹೆಚ್‌. ಡಿ ಯನ್ನುಮುಗಿಸಿರುವಂತಹ ಡಾ. ವಿನೀತ್‌ ಕುಮಾರ್‌ ಇವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಭಾಟಿಸಿದರು.

ಈ ಛಾಯಾಗ್ರಾಹಣ ಚಿತ್ರ ಪ್ರದರ್ಶನದಲ್ಲಿ ಛಾಯಾಗ್ರಾಹಕರಾದ ಸುಜಿತ್‌ ಎಸ್‌.ಕೆ, ಅಕ್ಷಯ್‌ ಆರ್ಟೋಪಿಯ, ಆಶ್ರಯ್‌ ಆರ್ಟೋಪಿಯ, ಮುರಳಿ ಅಬ್ಬೆಮನೆ, ಸಂಕೇತ್‌ ಕೊಟ್ಟಾರಿ ಹಾಗೂ ಕಾರ್ತಿಕ್‌ ಕಾಮತ್‌ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ರಂಗಭೂಮಿ,ಜೀವನ ಶೈಲಿ (lifestyle), ಅಮೂರ್ತ (abstracts), ಸ್ಟ್ರೀಟ್‌ ಹಾಗೂ ಏಕವರ್ಣ (monochrome) ಫೋಟೋಗ್ರಫಿ ಗಳನ್ನ ಪ್ರಸ್ತುತ ಪಡಿಸಿದ್ದಾರೆ. ಪ್ರದರ್ಶನದಲ್ಲಿ 25 ಫ್ರೇಮ್‌ ಗಳನ್ನ ಪ್ರಸ್ತುತ ಪಡಿಸಲಾಗಿತ್ತು. ಇದರಲ್ಲಿ ಇರುವ ಮತ್ತೊಂದು ವಿಶೇಷತೆ ಏನೆಂದರೆ ಹಲವಾರು ಛಾಯಾಗ್ರಹಣಗಳು ಮೊಬೈಲ್‌ ನಲ್ಲೆ ತೆಗೆದಂತಹ ಚಿತ್ರಗಳಾಗಿವೆ.