From the premises of Canara Cultural Academy and the Kalabhi Institute, a professional stage program was organised in Mangalore for the first time from ages 16 to 26 from 9 to 17 years. This event took place from morning 9 to evening 5 in Canara English Higher Primary School.

On the last day, three plays were performed at Canara PU College. Recently, Canara institute has started Canara Cultural Academy. Chief Ministers of Goa, Pramod Sawant inaugurated it. The purpose of this academy is to achieve comprehensive personality development along with the curriculum. In line with the national education plan, this institution conducts programs for the mental development of students. Focusing on art, artist, and education, this institution named “Kalabhi” has emerged with the slogan “For art, by artist; for the artist, for art”. It is always engaged in the search for new paths for art education. The joint event of these two institutions is “Aralu 2023”. Children learn and grow through every heartbeat from a young age. It learns to live with creativity, efficiency, and collaboration from society. Three young directors, Nina Sannehalli, directed the play “Sundari mathu mruga”, Bindu Raxidi directed the play “Rajana sawal Makkala Kamal “, and Bhuvan Manipal directed the play “Mowgli” at the direction of the institution Kalabhi. Ujjwal U V is currently the director of this camp, excelling in various fields of art such as drama, film, dance, etc.

ನಗರದ ಕೆನರಾ ಕಲ್ಬರಲ್ ಅಕಾಡೆಮಿ ಮತ್ತು ಕಲಾಭಿ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ  ಮೊದಲ ಬಾರಿಗೆ ಏ.16ರಿಂದ 26ರ ವರೆಗೆ 9-ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ವೃತ್ತಿಪರ ರಂಗಭೂಮಿ ಕಾರ್ಯಾಗಾರ ಆಯೋಜಿಸಲಾಗಿತ್ತು . ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕೊಡಿಯಾಲ್‌ಬೈಲಿನ ಕೆನರಾ ಇಂಗ್ಲಿಷ್ ಹೈಯ‌ರ್ ಪ್ರೈಮರಿ ಶಾಲೆಯಲ್ಲಿ ಈ ಕಾರ್ಯಾಗಾರ ನಡೆದಿದೆ .

ಕೊನೆಯ ದಿನ ಕೆನರಾ ಪಿಯು ಕಾಲೇಜಿನಲ್ಲಿ ಮೂರು ನಾಟಕಗಳ ಪ್ರದರ್ಶನ ನಡೆದಿತ್ತು. ಕೆನರಾ ವಿದ್ಯಾ ಸಂಸ್ಥೆ ಇತ್ತೀಚೆಗೆ ಕೆನರಾ ಕಲ್ಬರಲ್‌ ಅಕಾಡೆಮಿಯನ್ನು ಆರಂಭಿಸಿದೆ. ಗೋವಾದ ಮುಖ್ಯ ಮಂತ್ರಿಗಳಾದ ಪ್ರಮೋದ್ ಸಾವಂತ್ ರವರು ಇದನ್ನೂ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡಿದ್ದಾರೆ. ಈ ಅಕಾಡೆಮಿ ಮುಖಾಂತರ ಪಠ್ಯದೊಂದಿಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸ ಸಾಧಿಸುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ಯೋಜನೆಗೆ ಅನುಗುಣವಾಗಿ ಈ ಸಂಸ್ಥೆ ಹೊಸ ಯೋಜನೆಗಳನ್ನು ವಿದ್ಯಾರ್ಥಿಗಳ ಮಾನಸಿಕ ವಿಕಸನಕ್ಕಾಗಿ ಕಾರ್ಯಕ್ರಮ ನಿರ್ವಹಿಸುತ್ತಿದೆ. ಮಂಗಳೂರಿನಲ್ಲಿ ಕಲೆ, ಕಲಾವಿದ ಮತ್ತು ಕಲಿಕೆ; ಈ ಮೂರನ್ನು ಕೇಂದ್ರವಾಗಿಸಿಕೊಂಡು, ‘ಕಲೆಗಾಗಿ ಕಲಾವಿದ; ಕಲಾವಿದನಿಗಾಗಿ ಕಲೆ’ ಎನ್ನುವ ಧೈಯವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ಕಲಾಭಿ’. ಕಲೆಯ ಕಲಿಕೆಗಾಗಿ ನೂತನ ದಾರಿಗಳ ಹುಡುಕಾಟದಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದೆ. ಈ ಎರಡೂ ಸಂಸ್ಥೆಗಳು ಜತೆಗೂಡಿ ಹಮ್ಮಿಕೊಂಡಿರುವ ಕಾರ್ಯಾಗಾರವೇ “ಅರಳು 2023”. ಮಗು ಎಳವೆಯಿಂದಲೇ ಸ್ಪಂದನೆ ಮತ್ತು ಪ್ರತಿ ಸ್ಪಂದನೆಯ ಮೂಲಕ ಕಲಿಯುತ್ತಾ ಬೆಳೆಯುತ್ತದೆ. ಸೃಜನಶೀಲತೆ, ಕಾರ್ಯದಕ್ಷತೆ ಹಾಗೂ ಜತೆಗೂಡಿ ಬದುಕುವುದನ್ನು ಅದು ಸಮಾಜದಿಂದ ಕಲಿಯುತ್ತದೆ. , ಮೂರು ಯುವ ಭರವಸೆಯ ನಿರ್ದೇಶಕ, ನೀನಾಸಂ ಪದವೀಧರ ನವೀನ್ ಸಾಣೆಹಳ್ಳಿ ನಿರ್ದೇಶಿಸಿದ ಮೃಗ ಮತ್ತು ಸುಂದರಿ ನಾಟಕ, ರಂಗಭೂಮಿ ಮತ್ತು ಚಲನಚಿತ್ರ ನಟಿ ಬಿಂದು ರಕ್ಷಿದಿ ನಿರ್ದೇಶಿಸಿದ ರಾಜನ ಸವಾಲ್ ಮಕ್ಕಳ ಕಮಾಲ್, ನೀನಾಸಂ ಪದವೀಧರರ, ರಂಗಭೂಮಿ ನಿರ್ದೇಶಕ ಭುವನ್ ಮಣಿಪಾಲ ನಿರ್ದೇಶಿಸಿದ ಮೊಗ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ ಕಲಾಭಿ ಸಂಸ್ಥೆಯ ಕಾರ್ಯದರ್ಶಿ, ನೀನಾಸಂ ಪದವೀಧರ ಭರವಸೆಯ ನಟ, ನಾಟಕ, ಚಿತ್ರಕಲೆ, ನೃತ್ಯ ಹೀಗೆ ಕಲೆಯ ವಿಭಿನ್ನ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉಜ್ವಲ್ ಯು.ವಿ. ಈ ಶಿಬಿರದ ನಿರ್ದೇಶಕರಾಗಿದ್ದಾರೆ .

Mowgli

Bhuvan Manipal

Rajana Sawal Makkala Kamal

Bindu Raxidi

Mruga Mathu Sundari

Naveen sanehalli